PTI

ನವದೆಹಲಿ: ಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊಗೆ ಸೇರಿದ್ದ ಗುಪ್ತಾ, ಅದರ ಆಹಾರ ವಿತರಣಾ ವ್ಯವಹಾರದ ಸಿಇಒ ಸ್ಥಾನದಿಂದ 2020ರಲ್ಲಿ ಸಹ-ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು.

ಜೊಮ್ಯಾಟೊಗೆ ಕಳುಹಿಸಲಾದ ಸಂದೇಶದಲ್ಲಿ ಗುಪ್ತಾ ಅವರು, "ಜೀವನದಲ್ಲಿ ಇತರೆ ಅಪರಿಚಿತ ಸಾಹಸಗಳನ್ನು ಹುಡುಕುತ್ತಾ ಜೊಮ್ಯಾಟೊ ಬಿಟ್ಟು ಹೋಗಲು ನಿರ್ಧರಿಸಿರುವುದಾಗಿ" ತಿಳಿಸಿದ್ದಾರೆ.

 

ಕಂಪನಿ ಕಾಯಿದೆ, 2013 ಮತ್ತು ಪಟ್ಟಿ ಮಾಡುವ ನಿಯಮಗಳ ಅಡಿಯಲ್ಲಿ ಗುಪ್ತಾ ಅವರನ್ನು ಪ್ರಮುಖ ವ್ಯವಸ್ಥಾಪಕರಾಗಿ ನೇಮಿಸಿರಲಿಲ್ಲ ಎಂದು ಜೊಮ್ಯಾಟೊ ಹೇಳಿದೆ.

..